Index   ವಚನ - 1318    Search  
 
ನಂಬುಗೆಗೆ ಇಂಬಾಗದೆ ನೈಷ್ಠೆ ನೆಲೆಗೊಳ್ಳದು; ನೈಷ್ಠೆ ನೆಲೆಗೊಳ್ಳದೆ ಎಚ್ಚರವಚ್ಚೊತ್ತದು; ಎಚ್ಚರವಿಲ್ಲದೆ ಅನುಭವವು ಮನಂಗೊಳ್ಳದು; ಅನುಭವವಿಲ್ಲದೆ ಆನಂದವು ತಲೆದೋರದು; ಆನಂದವಿಲ್ಲದೆ ಶಿವಲಿಂಗದಲ್ಲಿ ಸಮರಸವಾಗದು. ಇಂತೀ ಆರು ತೆರನಾದ ಭಕ್ತಿಯ ಗೊತ್ತನರಿದಡೆ. ಭಕ್ತನೆಂಬೆನು ಮಹೇಶ್ವರನೆಂಬೆನು- ಇಲ್ಲದಿರ್ದಡೆ ಶುದ್ಧಭವಿಯೆಂಬೆನು ಕಾಣಾ ಕೂಡಲಚೆನ್ನಸಂಗಮದೇವಾ.