Index   ವಚನ - 1335    Search  
 
ನಾಯಿ ಬಲ್ಲುದೆ ದೇವರ ಬೋನವ? ದ್ರೋಹಿ ಬಲ್ಲನೆ ಗುರು-ಲಿಂಗ-ಜಂಗಮವನು? ಅಜ್ಞಾನಿ ಬಲ್ಲನೆ ಸುಜ್ಞಾನಿಯ ನೆಲೆಯನು? ಸೂಕರ ಬಲ್ಲುದೆ ಸುಭಕ್ಷ್ಯದ ಸವಿಯನು? ಆಚಾರಕ್ಕೆ ಪ್ರಾಣವಾದ ಸಂಗನಬಸವಣ್ಣನಲ್ಲದೆ ಗುರು-ಲಿಂಗ-ಜಂಗಮನು ಭೂತಪ್ರಾಣಿಗಳೆತ್ತಬಲ್ಲರು? ಕೂಡಲಚೆನ್ನಸಂಗಮದೇವಾ.