Index   ವಚನ - 1338    Search  
 
ನಿಂದಾಸ್ತುತಿಗಳ ಮಾಡುವ ದುರ್ವ್ಯಸನಿಗಳ, ದುರಾಚಾರಗಳಲ್ಲಿ ನಡೆವರುಗಳ, ಭಕ್ತರೆಂದು ಲಿಂಗವಂತರೆಂದು ಪತಿಕರಿಸರು ನೋಡಯ್ಯಾ. ದೂಷಣೆಯೆ ಪಾತಕವೆಂದುದಾಗಿ, ಭಕ್ತರ ನಿಂದಿಸಿ ಪಾತಕದಲ್ಲಿ ಬೀಳುವ ಪಾಕುಳರ ಮುಖವ ನೋಡಲಾಗದು, ಕೂಡಲ[ಚೆನ್ನ]ಸಂಗಮದೇವಾ