ಪಂಚಶತಕೋಟಿ ವಿಸ್ತೀರ್ಣ ಭೂಮಂಡಲ ಮೊದಲಾದ
ನವಖಂಡಪೃಥ್ವಿಯೆಲ್ಲವು ಒಂದು ಭುವನದೊಳಡಗಿತ್ತು.
ಇಂತಹ ಈರೇಳು ಭುವನವನೊಳಕೊಂಡ ಮಹಾಘನಕ್ಕೆ
ಸಯದಾನವ ನೀಡಿಹೆನೆಂಬ ಸ್ವಾಮಿಯ ಮರುಳತನವನೇನೆಂಬೆನು?
ಕೂಡಲಚೆನ್ನಸಂಗಮದೇವರ ತೃಪ್ತಿಯ ತೆರನನೊಲಿವಡೆ
ನೀವು ಬೋನ, ನಾನು ಪದಾರ್ಥ.
ಇದರಿಂದ ಮೇಲೇನೂ ಘನವಿಲ್ಲ
ಕಾಣಾ ಸಂಗನಬಸವಣ್ಣಾ.