Index   ವಚನ - 1372    Search  
 
ಪರಮಾರಾಧ್ಯರ ಭಾವ ಅಂತಿರ್ದಡೆ ಆಗಬಹುದು: ನುಡಿದ ತೆರದಿ ನೋಡುವ ಭಕ್ತರ ಮನಕ್ಕೆ ಸಂಶಯ; ನೋಡುವ ರಾಜಕುಮಾರರಿಗೆ ವಿಪರೀತ ಉಪದ್ರವ. ಇದು ಕಾರಣ, ಗುರು-ಶಿಷ್ಯರಲ್ಲಿರ್ಪುದೆ ಲೇಸು ಕೂಡಲಚೆನ್ನಸಂಗಮದೇವಾ.