Index   ವಚನ - 1387    Search  
 
ಪೂರ್ವದ್ವಾರವ ಬಿಟ್ಟು ಪಶ್ಚಿಮದ್ವಾರದಲ್ಲಿ ಪ್ರಾಣನಿರವ ಮಾಡಿ, ನಾಭಿಮುಖದಗ್ನಿಯನೂರ್ಧ್ವಮುಖಕ್ಕೊಯ್ದು, ಶಂಕಿನಿಯ ನೋಟದಲ್ಲಿ ನಿಲಯವಾದಾತ ಶರಣ. ಆತನೇ ತೂರ್ಯಾತೀತ ಉನ್ಮನಿಯವಸ್ಥೆಯಾದಾತ ಆತನೇ ಜನನ-ಮರಣವರ್ಜಿತನಪ್ಪ, ಆತನೇ ನಿರ್ದೇಹಿಯಪ್ಪ, ಆತನೇ ಮಹಾಪುರುಷನು. ಇದನಲ್ಲಾ ಎಂಬ ಗುರುದ್ರೋಹಿಯನೇನೆಂಬೆ, ಇದನಲ್ಲಾ ಎಂಬ ಲಿಂಗದ್ರೋಹಿಯನೇನೆಂಬೆ, ಅಯ್ಯಾ ಕೂಡಲಚೆನ್ನಸಂಗಮದೇವಾ.