Index   ವಚನ - 1393    Search  
 
ಪೃಥ್ವಿ ಭಕ್ತಸ್ಥಲ, ಮುಖ ನಾಸಿಕ, ಅದಕ್ಕೆ ಆಚಾರಲಿಂಗ. ಅಪ್ಪು ಮಾಹೇಶ್ವರಸ್ಥಲ, ಮುಖ ಜಿಹ್ವೆ, ಅದಕ್ಕೆ ಗುರುಲಿಂಗ. ತೇಜ ಪ್ರಸಾದಿಸ್ಥಲ, ಮುಖ ನೇತ್ರ, ಅದಕ್ಕೆ ಶಿವಲಿಂಗ. ವಾಯು ಪ್ರಾಣಲಿಂಗಿಸ್ಥಲ, ಮುಖ ಸ್ಪರ್ಶನ, ಅದಕ್ಕೆ ಜಂಗಮಲಿಂಗ. ಆಕಾಶ ಶರಣಸ್ಥಲ, ಮುಖ ಶ್ರೋತ್ರ, ಅದಕ್ಕೆ ಪ್ರಸಾದಲಿಂಗ. ಅತೀತ ಐಕ್ಯಸ್ಥಲ, ಮುಖ ತೃಪ್ತಿ, ಅದಕ್ಕೆ ಮಹಾಲಿಂಗ. ಇಂತೀ ಷಡುಸ್ಥಲಂಗಳುತ್ಪತ್ಯ ಕೂಡಲಚೆನ್ನಸಂಗಮದೇವಾ.