Index   ವಚನ - 1416    Search  
 
ಬಂದವಸರದಲ್ಲಿ[ಲಿಂಗವ ನೇತ್ರದಲ್ಲಿ ಇರಿಸ]ಬೇಕು. ಬಂದವಸರದಲ್ಲಿ ಲಿಂಗವ ಶ್ರೋತ್ರದಲ್ಲಿ ಇರಿಸಬೇಕು, ಬಂದವಸರದಲ್ಲಿ ಲಿಂಗವ ಘ್ರಾಣದಲ್ಲಿ ಇರಿಸಬೇಕು, ಬಂದವಸರದಲ್ಲಿ ಲಿಂಗವ ಜಿಹ್ವೆಯಲ್ಲಿ ಇರಿಸಬೇಕು, ಬಂದವಸರದಲ್ಲಿ ಲಿಂಗವ ಸರ್ವಾಂಗದಲ್ಲಿ ಇರಿಸಬೇಕು, ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದಿಯಾದಡೆ.