Index   ವಚನ - 1434    Search  
 
ಬೇಕೆನಲಾಗದು ಶರಣಂಗೆ, ಬೇಡೆನಲಾಗದು ಶರಣಂಗೆ, ಲಿಂಗವಶದಿಂದ ಬಂದುದ ಪರಿಕರಿಸದಿರ್ದಡೆ ಮಹಾಘನವು ಅವಗವಿಸದು ನೋಡಾ. ಅದೆಂತೆಂದಡೆ: "ಅವ್ರತೋಸುವ್ರತಶ್ಚೈವ ವಸ್ತ್ರ ದಿವ್ಯಾನ್ನಭೂಷಣಮ್| ಅಕಲ್ಪಿತಂ ಚ ಭೋಗಾನಾಂ ಸರ್ವಂ ಲಿಂಗಸ್ಯ ಪ್ರೇರಣಮ್"|| ಎಂದುದಾಗಿ ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣರ ಪರದ್ವಾರಿಗಳೆಂದು ನುಡಿದವರಿಗೆ ನಾಯಕನರಕವಯ್ಯಾ.