ಬೇಡುವಾತ ಜಂಗಮನಲ್ಲ,
ಬೇಡಿಸಿಕೊಂಬಾತ ಭಕ್ತನಲ್ಲ,
ಬೇಡದೆ ಆ ಭಕ್ತ ಮಾಡಿದ ಮಾಟವ
ಪರಿಣಾಮಿಸಬಲ್ಲಡೆ ಜಂಗಮ.
ಬೇಡಿಸಿಕೊಳ್ಳದೆ ಆ ಜಂಗಮ ಇಂಗಿತವನರಿದು
ಅವನ ಮನದಿಚ್ಛೆಯ ಸಲಿಸಬಲ್ಲಡೆ ಆತನೆ ಪರಮಭಕ್ತ.
ಆ ಭಕ್ತ ನನ್ನದು ನಾನೆಂದು ನುಡಿದಡೆ
ನಾಯ ಮಾಂಸ, ಸತ್ತ ಹೆಣನ ಮಲವು!
ಇದು ಕಾರಣ-ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ
ಬೇಡಿಸಿಕೊಳ್ಳದೆ ಮಾಡುವ ಭಕ್ತನುಂಟಾದಡೆಯೂ
ಬೇಡದೆ ಮಾಡಿಸಿಕೊಂಬುವ
ಜಂಗಮಪೂರ್ವವಯ್ಯಾ.