Index   ವಚನ - 1462    Search  
 
ಭಕ್ತಿಯೆಂಬುದು ಬಾಳ ಬಾಯ ಧಾರೆ, ಅದೆಂತೆಂದಡೆ: ಕಂಗಳಿನ ವಳಯದಂತೆ ಸುತ್ತಲರಿದು, ಮಧ್ಯಾಹ್ನದ ಆದಿತ್ಯನಂತೆ ನೋಡಲರಿದು, ಪಾಪಿಯ ಕೂಸಿನಂತೆ ಎತ್ತಲರಿದು, ವಾಳಿ ಗುದುರಿಯಂತೆ ಹತ್ತಲರಿದು, ಸಜ್ಜನವುಳ್ಳ ಸತಿಯಂತೆ ಉಳಿಯಲರಿದು, ಪಾದರಸದಂತೆ ಹಿಡಿಯಲರಿದು, ಮೊದಲುಗೆಟ್ಟ ಹರದನಂತೆ ಕೆತ್ತಿಕೊಂಡಿಹುದು, ಭಕ್ತಿಯ ಮುಖ ಎತ್ತಲೆಂದರಿಯಬಾರದು. ಇದು ಕಾರಣ, ಕೂಡಲಚೆನ್ನಸಂಗಯ್ಯ ಹಿಡಿಯಬಲ್ಲವರಿಗಳವಟ್ಟಿತ್ತು ಹಿಡಿಯಲರಿಯದವರಿಗೆ ವಿಗುರ್ಬಣೆಯಾಗಿತ್ತು.