Index   ವಚನ - 1473    Search  
 
ಭವಿ ಭಕ್ತನಾದರೇನಯ್ಯಾ ಪೂರ್ವಾಶ್ರಯವಳಿಯದನ್ನಕ್ಕ? ವೇಶಿ ಭಕ್ತೆಯಾದರೇನಯ್ಯಾ ಎಂಜಲ ತಿಂಬುದ ಬಿಡದನ್ನಕ್ಕ? ಅರಸು ಭಕ್ತನಾದರೇನಯ್ಯಾ, ಅಹಂಕಾರವಳಿಯದನ್ನಕ್ಕ? ಇಂತೀ ಮೂವರಿಗೆ ಲಿಂಗವ ಕೊಟ್ಟಾತ ವ್ಯವಹಾರಿ, ಕೊಂಡಾತ ಲಾಭಗಾರ. ಇವರ ಭಕ್ತಿಯೆಂಬುದು, ಒಕ್ಕಲಗಿತ್ತಿ ಹೊಸ್ತಿಲ ಪೂಜೆಯ ಮಾಡಿ, ಇಕ್ಕಾಲಿಕ್ಕಿ ದಾಟಿದಂತಾಯಿತ್ತು. ಹಟ್ಟಿಯ ಹೊರಗೆ ಬೆನವನ ಪೂಜೆಯ ಮಾಡಿ ತಿಪ್ಪೆಯೊಳಗೆ ಬಿಟ್ಟಂತಾಯಿತ್ತು. ಜಂಗಮದ ಪೂಜೆಯ ಮಾಡಿ ನೈಷ್ಠೆಯಿಲ್ಲದ ಭ್ರಷ್ಟರ ಮೆಚ್ಚುವನೆ ಕೂಡಲಚೆನ್ನಸಂಗಮದೇವ?