Index   ವಚನ - 1476    Search  
 
ಭವಿಯ ಮನೆಯಲ್ಲಿ ಭವಿಯ ಹಸ್ತದಲ್ಲಿ ಭವಿಪಾಕವಲ್ಲದೆ, ಭಕ್ತರ ಮನೆಯಲ್ಲಿ ಭಕ್ತರ ಹಸ್ತದಲ್ಲಿ ಭವಿಪಾಕವುಂಟೆ? ಇಲ್ಲ ಇಲ್ಲ. ಸುಡಲಿವದಿರ ಭಕ್ತಿಯೆಂತಹುದೊ, ಯುಕ್ತಿಯಂತಹುದೊ, ಶೀಲವೆಂತಹುದೊ! ಸದ್ಭಕ್ತಿಯಿಂದ ಮಾಡಿ ನೀಡುವ ಭಕ್ತನು ಭಕ್ತದೇಹಿಕದೇವ, ಆತ ತಾನೆ ಪರಶಿವನು. ಆ ಭಕ್ತನ ಹಸ್ತದಿಂದ ಬಂದ ದ್ರವ್ಯಪದಾರ್ಥಂಗಳೆಲ್ಲವೂ ಪ್ರಸನ್ನತ್ವದಿಂದ ಬಂದುವಾಗಿ ಪ್ರಸಾದ, ಲಿಂಗಕ್ಕೆ ಕೊಟ್ಟು ಕೊಂಬುದು. ಅದು ತಾನೆ ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವು. ಆ ಮಹಿಮನು ಭಕ್ತದೇಹಿಕದೇವನೆಂದು ಭಾವಶುದ್ಧಿಯಿಂದ ಪ್ರಸಾದವ ಕೊಂಡಡೆ, ಅದೇ ಮಹಾಪ್ರಸಾದ ಕೂಡಲಚೆನ್ನಸಂಗಯ್ಯಾ.