Index   ವಚನ - 1478    Search  
 
ಭವಿವಿರಹಿತನಾಗಿ ಭಕ್ತನಾದ ಬಳಿಕ ತನ್ನ ಮನೆಯಲ್ಲಿ ಮಾಡಿದ ಪಾಕವ ಭವಿಗಿಕ್ಕಬಹುದೆ? ಇಂತಪ್ಪ ಯುಕ್ತಿಶೂನ್ಯರಿಗೆ ಪ್ರಸಾದವಿಲ್ಲ; ಮುಕ್ತಿ ಎಂತಪ್ಪುದೊ? ಮುಂದೆ ನಾಯ ಬಸುರಲ್ಲಿ ಬಪ್ಪುದು ತಪ್ಪದು! ಕೂಡಲಚೆನ್ನಸಂಗಮದೇವಯ್ಯಾ ನಿಮ್ಮಾ ಪಥವನರಿಯದ ಅನಾಚಾರಿಗಿನ್ನೆಂತಯ್ಯ?