Index   ವಚನ - 1489    Search  
 
ಮದುವಣಿಗನಿಲ್ಲದೆ ನಿಬ್ಬಣವಿರುವುದೆ ಅಯ್ಯಾ? ಕೋಗಿಲೆಗಳಲ್ಲದೆ ವಸಂತವನಂಗಳೊಪ್ಪುವುವೆ ಅಯ್ಯಾ? ತಾವರೆಗಳಿಲ್ಲದೆ ಕೊಳಂಗಳೊಪ್ಪುವುವೆ ಅಯ್ಯಾ? ಪತಿಯಿಲ್ಲದೆ ಸತಿಗೆ ಸಂತೋಷವಹುದೆ ಅಯ್ಯಾ? ಆಧಾರವಿಲ್ಲದೆ ಸೂತ್ರವ ಮೆಟ್ಟಿ ನಡೆಯಬಹುದೆ ಅಯ್ಯಾ? ಹೂಳಿದ ನಿಧಾನವ ಅಂಜನವಿಲ್ಲದೆ ಕಾಣಬಹುದೆ ಅಯ್ಯಾ? ಎನಗೆನ್ನ ಮಡಿವಾಳದೇವನಿಲ್ಲದೆ ಒಪ್ಪದೆಂದು ಕೂಡಲಚೆನ್ನಸಂಗಮದೇವ ಬಿನ್ನಹವಂ ಮಾಡಿ ಕಳುಹಿದರೆಂದು ಹೇಳಯ್ಯಾ ಪಡಿಹಾರಿ ಉತ್ತಣ್ಣ.