Index   ವಚನ - 1493    Search  
 
ಮನದ ಭ್ರಮೆಯ ಕಳೆದು, ಗುರುವ ಮಾಡಿ ಗುರುಭಕ್ತನಾದನಯ್ಯಾ ಬಸವಣ್ಣನು. ಪ್ರಾಣದ ಭ್ರಮೆಯ ಕಳೆದು, ಲಿಂಗವ ಮಾಡಿ ಲಿಂಗಭಕ್ತನಾದನಯ್ಯಾ ಬಸವಣ್ಣನು. ಸಂಸಾರದ ಭ್ರಮೆಯ ಕಳೆದು, ಜಂಗಮವ ಮಾಡಿ ಜಂಗಮಭಕ್ತನಾದನಯ್ಯಾ ಬಸವಣ್ಣನು. ಈ ತ್ರಿವಿಧಭ್ರಮೆಯ ತ್ರಿಕರಣದಲ್ಲಿ ಕಳೆದು, ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯನಾದನಯ್ಯಾ ಬಸವಣ್ಣನು.