Index   ವಚನ - 1523    Search  
 
ಮಾಯದ ಕಾಯದಲ್ಲಿ ಹುಟ್ಟಿದ ಕಷ್ಟಗುಣಂಗಳ ಬಿಟ್ಟು, ನಿಷ್ಠೆಯಿಂದ ಬಂದು ನಿಮ್ಮ ಚರಣಕೆರಗಿದೆನು, ಮೊರೆಹೊಕ್ಕೆನು, ಕೃಪೆಯಿಂದಲೆನಗೆ ಉಪದೇಶಪ್ರಸಾದವನಿತ್ತು ಸಲಹಾ, ಬಸವಣ್ಣಗುರುವೆ, ಕೂಡಲಸಂಗಮದೇವಾ.