Index   ವಚನ - 1537    Search  
 
ಮೋಹದಲಚ್ಚೊತ್ತಿ ಎಚ್ಚ ಎರಕವ ಬಿಟ್ಟು, ಗಡ್ಡ ಮಂಡೆ ಬೋಳಿಸಿ, ಮೂರು ಬೆರಳಿನ ಕುರುಹಿನಿಂದವೆ ಎಚ್ಚರಿಕೆಯಲ್ಲಿ ನಡೆವುದು, ನುಡಿಯುವುದು. ಅಂತಲ್ಲದೆ-ಮನದ ವಿಕಾರದ ಕತ್ತಲೆಯೊಳಗೆ ಸಿಲುಕಿ ಕಾಲೂರಿ ನಿಂದು ನಿಲುವೆ. ಪ್ರಸನ್ನತೆಗೆ ನೆಲೆಯಾಗರ್ದಿಡೆ, ಕೂಡಲಚೆನ್ನಸಂಗಯ್ಯನು ಗಸಣಿಗೆ ಗೋರಿಗೊಳಿಸುವನು.