Index   ವಚನ - 1540    Search  
 
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿ ಎಂಬೀ ಅಷ್ಟಾಂಗಯೋಗವನರಿದು, ನಿಟಿಲತಟ ಭ್ರೂಮಧ್ಯದ ಮೇಲಣ ಉಭಯದಳಕಮಲದ ಮೇಲೆ ಇಪ್ಪ ಜೀವ ಪರಮನ ಭೇದವೆಂತಿರ್ದುದೆಂದಡೆ: "ಜೀವಾತ್ಮಾ ಪರಮಾತ್ಮಾ ಚೇನ್ಮುಕ್ತಾನಾಂ ಪರಮಾ ಗತಿಃ | ಅವ್ಯಯಃ ಪುರುಷಃ ಸರ್ವಕ್ಷೇತ್ರಜ್ಞೋsಕ್ಷಯ ಏವ ಚ"|| ಎಂದುದಾಗಿ ಜೀವಪರಮರಿಬ್ಬರನು ಏಕಾರ್ಥವ ಮಾಡಲ್ಕೆ, “ದ್ವಾಸುಪರ್ಣಾ ಸಯುಜಾ ಶಾಖಾಯೌ ಸಮಾನಂ ವೃಕ್ಷಂ ಪರಿಷಸ್ವಜಾತೇ ತಯೋರನ್ಯಃ ಪಿಪ್ಪಲಂ ಸ್ವಾದ್ವತ್ತೀ ಅನಶ್ನನ್ನ ನ್ಯೋsಭಿಚಾಕಶೀತಿ” ಎಂದುದಾಗಿ ಬ್ರಹ್ಮರಂಧ್ರದ ನಾಳದೊಳು ಪ್ರಯೋಗಿಸಿ ಕವಾಟ ದ್ವಾರವ ತೆಗೆದು ತೆರೆಹಿಲ್ಲದೆ ಬಯಲಾದ ಕೂಡಲ ಚೆನ್ನಸಂಗಾ ನಿಮ್ಮ ಶರಣ.