ರೂಪುವಿರಹಿತ ಲಿಂಗ ಕಂಡಾ!
ಗುರುವುಳ್ಳನ್ನಕ್ಕ ಶಿಷ್ಯನಲ್ಲಾ,
ಲಿಂಗವುಳ್ಳನ್ನಕ್ಕ ಜಂಗಮವಲ್ಲಾ,
ಪ್ರಸಾದವುಳ್ಳನ್ನಕ್ಕ ಭಕ್ತನಲ್ಲಾ.
ಲಿಂಗೈಕ್ಯನಾದಡೆ, ಸ್ಥಾವರವಿರಹಿತ
ಶರಣಭರಿತನಾಗಿರಬೇಕು.
ಕಾಯಸಾಹಿತ್ಯವೆಲ್ಲಿಯಾದಡೆಯು ಉಂಟು,
ಆತ್ಮಸಾಹಿತ್ಯವ ಪೂರ್ವ ನೋಡಾ!
ಆಚಾರ[ಸಾಹಿತ್ಯ]ವೆ ಲೋಕ,
ಅನಾಚರ[ಸಾಹಿತ್ಯ]ವೆ ಶರಣ
ಇದು ಕಾರಣ ಕೂಡಲಚೆನ್ನಸಂಗಯ್ಯಾ,
ಅನಾಚಾರಗಲ್ಲದೆ ಪ್ರಸಾದವಿಲ್ಲ.
Art
Manuscript
Music
Courtesy:
Transliteration
Rūpuvirahita liṅga kaṇḍā!
Guruvuḷḷannakka śiṣyanallā,
liṅgavuḷḷannakka jaṅgamavallā,
prasādavuḷḷannakka bhaktanallā.
Liṅgaikyanādaḍe, sthāvaravirahita
śaraṇabharitanāgirabēku.
Kāyasāhityavelliyādaḍeyu uṇṭu,
ātmasāhityava pūrva nōḍā!
Ācāra[sāhitya]ve lōka,
anācara[sāhitya]ve śaraṇa
idu kāraṇa kūḍalacennasaṅgayyā,
anācāragallade prasādavilla.