Index   ವಚನ - 1577    Search  
 
ಲಿಂಗಮುಖದಿಂದ ಬಂದುದು ಶುದ್ಧ ಪ್ರಸಾದ, ಜಂಗಮಮುಖದಿಂದ ಬಂದುದು ಸಿದ್ಧಪ್ರಸಾದ, ಗುರುಮುಖದಿಂದ ಬಂದುದು ಪ್ರಸಿದ್ಧಪ್ರಸಾದ. ಅದೆಂತೆಂದಡೆ: "ಲಿಂಗಂಚ ಇಷ್ಟರೂಪಂತು ಜಂಗಮ ಪ್ರಾಣಲಿಂಗಕಂ ಭಾವಲಿಂಗಂ ಗುರೋರ್ಲಿಂಗಂ ತ್ರಿವಿಧಂಚೇಕಮುಚ್ಯತೇ ಶುದ್ಧಂ ಲಿಂಗಮುಖಂ ತ್ಯಕ್ತ್ವಾ ಸಿದ್ಧಂ ಚರವಿಸರ್ಜಿತಃ ಪ್ರಸಿದ್ಧಂ ಚ ಗುರೋರ್ಭುಕ್ತಂ ಇತ್ಯೇತತ್ರಿವಿಧಂ ಸ್ಮೃತಂ" ಎಂದುದಾಗಿ, ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದತ್ರಯದಲ್ಲಿ ಅವಧಾನಿ ಕೂಡಲಚೆನ್ನಸಂಗಾ, ನಿಮ್ಮ ಶರಣ.