ಲಿಂಗಾರ್ಚನೆಯಂ ಮಾಡಿ,
ಅಂಗಭಾಜನ, ಲಿಂಗಭಾಜನ, ಪತ್ರಭಾಜನದಲ್ಲಿ
ಸಹಭೋಜನವ ಮಾಡುವ ಸಮಯದಲ್ಲಿ
ಗುರು ಲಿಂಗ ಜಂಗಮ[ಪ್ರಸಾದ]ವೆಂದೆ ಪ್ರಸಾದವ ಪಡೆಯುವುದು.
ಪ್ರಸಾದವೆಂದು ಪಡೆದ ಬಳಿಕ ಪದಾರ್ಥವೆಂದು
ಭೋಗಿಸಿದಡೆ, ಪ್ರಸಾದ ದ್ರೋಹ.
ಪ್ರಸಾದವೆಂದು ಅರ್ಪಿತವ ಭೋಗಿಸಿ,
ಉಳಿಯದ ಹಾಂಗೆ ತೆಗೆದುಕೊಂಬುದಯ್ಯಾ.
ಮೀರಿದಂದು ಅನಿಲಬ್ರಹ್ಮವಂಗಸಂಬಂಧವಾದ
ಉಳುಮೆಯಲಿ ಉಳಿದ ತಾರಕಬ್ರಹ್ಮವಯ್ಯಾ.
[ಅದೇನು ಕಾರಣವೆಂದಡೆ:]
ಶೈವಕ್ಕೂ ವೀರಶೈವಕ್ಕೂ ಭೇದವಿಲ್ಲ! ಆದಿಗೂ ಅನಾದಿಗೂ ನೀನೆ!
ಪದಾರ್ಥಕ್ಕೂ ಪ್ರಸಾದಕ್ಕೂ ನೀನೆ, ಭೂ ಗಗನಕ್ಕೂ ನೀನೇ!
ಕ್ರೀ ನಿಃ [ಕ್ರೀ ಗೂ ನೀನೇ].
ಪ್ರಸಾದದ ಆದಿಕುಳವ ನಾನೆತ್ತ ಬಲ್ಲೆನಯ್ಯಾ! ದೇವ,
ಕ್ರೀ ಮೀರಿದುದಾಗಿ ಸಗುಣ ನಿರ್ಗುಣವಾದ,
ಸಾಕಾರ ನಿರಾಕಾರವಾದ.
ಏಕ ಬ್ರ[ಹ್ಮ ಸಂ]ಗನ ಬಸವಣ್ಣ ಬಿಬ್ಬಿ ಬಾಚಯ್ಯ
ಮರುಳಶಂಕರದೇವರೆಂಬ ಪರಂಜ್ಯೋತಿ
ಮಹಾಲಿಂಗದಲ್ಲಿ ಏಕತೆಯಾದೆನು ಕಾಣಾ,
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Liṅgārcaneyaṁ māḍi,
aṅgabhājana, liṅgabhājana, patrabhājanadalli
sahabhōjanava māḍuva samayadalli
guru liṅga jaṅgama[prasāda]vende prasādava paḍeyuvudu.
Prasādavendu paḍeda baḷika padārthavendu
bhōgisidaḍe, prasāda drōha.
Prasādavendu arpitava bhōgisi,
uḷiyada hāṅge tegedukombudayyā.
Mīridandu anilabrahmavaṅgasambandhavāda
uḷumeyali uḷida tārakabrahmavayyā.
[Adēnu kāraṇavendaḍe:]
Śaivakkū vīraśaivakkū bhēdavilla! Ādigū anādigū nīne!
Padārthakkū prasādakkū nīne, bhū gaganakkū nīnē!
Krī niḥ [krī gū nīnē].
Prasādada ādikuḷava nānetta ballenayyā! Dēva,
krī mīridudāgi saguṇa nirguṇavāda,
sākāra nirākāravāda.
Ēka bra[hma saṁ]gana basavaṇṇa bibbi bācayya
maruḷaśaṅkaradēvaremba paran̄jyōti
mahāliṅgadalli ēkateyādenu kāṇā,
kūḍalacennasaṅgamadēvā.