ಲಿಂಗೋದಕ ಪಾದೋದಕ, ಪ್ರಸಾದೋದಕವೆಂದು ತ್ರಿವಿಧ:
ಲಿಂಗೋದಕವೆಂಬುದು ಶಿವಸಂಸ್ಕಾರದಿಂದಾದುದು,
ಪಾದೋದಕವೆಂಬುದು ಲಿಂಗಕ್ಕೆ ಮಜ್ಜನಕ್ಕೆರೆದುದು,
ಪ್ರಸಾದೋದಕವೆಂಬುದು ಲಿಂಗವಾರೋಗಿಸಿದ ಬಳಿಕ
ಸಿತಾಳಂಗೊಟ್ಟುದು.
ಲಿಂಗೋದಕದಲ್ಲಿ ಲಿಂಗಕ್ಕೆ ಪಾಕಪ್ರಯತ್ನ, ಮಜ್ಜನಕ್ಕೆರೆವುದು.
ಪಾದೋದಕದಲ್ಲಿ ಮುಖಪಕ್ಷಾಲನವ ಮಾಡುವುದು,
ಶಿರಸ್ಸಿನ ಮೇಲೆ ತಳಿದುಕೊಂಬುದು.
ಪ್ರಸಾದೋದಕವನಾರೋಗಿಸುವುದು
ಇಂತೀ ತ್ರಿವಿಧೋದಕ.
ದಾಸೋಹ ಷಟ್‍ಪ್ರಕಾರ ವರ್ತಿಸುವುದು.
ಭಕ್ತನಿಂದೆಯ ಮಾಡಲಾಗದು,
ಆಚಾರನಿಂದೆಯ ಮಾಡಲಾಗದು.
ಹುಸಿಯಿಲ್ಲದಿದ್ದಡೆ ಭಕ್ತನು-
ಇಂತಿದು ಭಕ್ತಸ್ಥಲ ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Liṅgōdaka pādōdaka, prasādōdakavendu trividha:
Liṅgōdakavembudu śivasanskāradindādudu,
pādōdakavembudu liṅgakke majjanakkeredudu,
prasādōdakavembudu liṅgavārōgisida baḷika
sitāḷaṅgoṭṭudu.
Liṅgōdakadalli liṅgakke pākaprayatna, majjanakkerevudu.
Pādōdakadalli mukhapakṣālanava māḍuvudu,
śiras'sina mēle taḷidukombudu.
Prasādōdakavanārōgisuvudu
intī trividhōdaka.
Dāsōha ṣaṭprakāra vartisuvudu.
Bhaktanindeya māḍalāgadu,
ācāranindeya māḍalāgadu.
Husiyilladiddaḍe bhaktanu-
intidu bhaktasthala kūḍalacennasaṅgamadēvā.