Index   ವಚನ - 1600    Search  
 
ವಾಗಾದಿ ಕರ್ಮೇಂದ್ರಿಯಂಗಳು ಇವಕ್ಕೆ ವಿವರ: ವಾಕು: ನುಡಿವುದು, ಪಾಣಿ: ಮಾಡುವುದು ಪಾದ: ನಡೆವುದು, ಪಾಯು: ಸರ್ವಾಂಗದಲ್ಲಿ ಕೂಡುವುದು. ಗುಹ್ಯ: ಸೇರಿಸುವುದು. ಇಂತೀ ಪಂಚಕರ್ಮೇಂದ್ರಿಯಂಗಳಲ್ಲಿ ಚರಿಸದೆ ಸುಚಾರಿತ್ರದಲ್ಲಿ ನಡೆಯಬಲ್ಲಡೆ ಕೂಡಲಚೆನ್ನಸಂಗಯ್ಯನಲ್ಲಿ ಶರಣನೆನಿಸುವನು.