ಶಿವತಂತ್ರದಿಂದ ಸುಖದುಃಖಗಳು
ಬರುತಿಹವೆಂದರಿಯದೆ
ನರಗುರಿಗಳಿಗೆ, ರೋಗ ದಾರಿದ್ರ್ಯ
ಅಪಜಯಂಗಳು ಬರುತ್ತಿರಲು
ವಿಪ್ರಗೆ ಕೈಮುಗಿದು ಕಾಣಿಕೆಯನಿಕ್ಕಿ ತನ್ನ ಹೆಸರ ಹೇಳಿ
ಸೂರ್ಯಬಲ ಚಂದ್ರಬಲ ಬೃಹಸ್ಪತಿಬಲ ನವಗ್ರಹಬಲವ
ಕೇಳುವವರಿಗೆ ಎಲ್ಲಿಯದೋ ಶಿವಭಕ್ತಿ?
ಸೂರ್ಯನು ಜ್ಞಾನವುಳ್ಳವನಾದಡೆ
ಗೌತಮಮುನೀಶ್ವರನ ಹೆಂಡತಿ ಅಹಲ್ಯಾದೇವಿಗೆ ಮೋಹಿಸಿ
ಮುನಿಯ ಶಾಪದಿಂದ ಕ್ಷಯದೊಳಗಿಹನೆ?
ಅಲ್ಲದೆ ದಕ್ಷನ ಯಾಗದಲ್ಲಿ ಹಲ್ಲ ಹೋಗಲಾಡಿಸಿಕೊಂಬನೆ?
ಚಂದ್ರನು ಜ್ಞಾನವುಳ್ಳವನಾದಡೆ ಗುರುವಿನ ಹೆಂಡತಿಗೆ ಅಳುಪಿ
ಕೊಂಡೊಯ್ದು ಜಾತಜ್ವರದಲ್ಲಿ ಅಳಲುತಿಹನೆ?
ಬೃಹಸ್ಪತಿ ಜ್ಞಾನವುಳ್ಳವನಾದಡೆ ಸಕಲ ಜ್ಯೋತಿಷ್ಯಗಳ ನೋಡಿ
ವಿವಾಹವಾದ ಹೆಂಡತಿ ರೋಹಿಣೀದೇವಿಯ
ಚಂದ್ರನೆತ್ತಿಕೊಂಡು ಹೋಹಾಗ ಸುಮ್ಮನಿದ್ದುದು ಏನು ಜ್ಞಾನ?
ಶನಿ ಜ್ಞಾನವಳ್ಳವನಾದಡೆ ಕುಂಟನಾಗಿ ಸಂಕೋಲೆ ಬೀಳ್ವನೆ?
ಅದು ಕಾರಣ-ತಮಗೆ ಮುಂಬಹ ಸುಖದುಃಖಂಗಳನರಿಯದವರು
ಮತ್ತೊಬ್ಬರ ಸುಖದುಃಖಂಗಳ ಮೊದಲೆ ಅರಿಯರು.
ಬೃಹಸ್ಪತಿಯ ಮತದಿಂದೆ ದಕ್ಷ,
ಯಾಗವನಿಕ್ಕೆ ಕುರಿದಲೆಯಾಯಿತ್ತು.
ಬೃಹಸ್ಪತಿಯ ಮತದಿಂದೆ ದ್ವಾರಾವತಿ ನೀರಲ್ಲಿ ನೆರೆದು
ಕೃಷ್ಣನ ಹದಿನಾರುಸಾವಿರ ಸ್ತ್ರೀಯರ
ಹೊಲೆಬೇಡರು ಸೆರೆಯನೊಯ್ದರು,
ಶ್ರೀರಾಮನ ಹೆಂಡತಿ ಸೀತಾಂಗನೆ ಸೆರೆಯಾದಳು.
ಇಂತೀ ತಮತಮಗೆ ಮುಂದೆ ಬಹ
ಅಪಜಯಂಗಳನರಿಯದ ಕಾರಣ,
ಆ ಬೃಹಸ್ಪತಿ ಜ್ಞಾನಿಯ ಮತದಿಂದೆ,
ಅಭಾಷ ಜೋಯಿಸರ ಮಾತ ಕೇಳಿ
ಹುಣ್ಣಿಮೆ ಅಮವಾಸೆಯಲ್ಲಿ ಉಪವಾಸವಿದ್ದು,
ಗ್ರಹಬಲವುಳ್ಳ ಶುಭಮುಹೂರ್ತದಲ್ಲಿ,
ಅರಳಿಯ ಮರಕ್ಕೆ ನೀರ ಹೊಯ್ದು
ನೂಲ ಸುತ್ತಿ ವಿಪ್ರಜೋಯಿಸರ್ಗೆ ಹೊನ್ನು ಹಣವ ಕೊಟ್ಟಡೆ,
ಹೋದೀತೆಂಬ ಅನಾಚಾರಿಯ ಮಾತ ಕೇಳಲಾಗದು.
“ವಸಿಷ್ಠೇನ ಕೃತೇ ಲಗ್ನೇ ವನೇ ರಾಮೇಣ ವನವಾಸಿತೇ|
ಕರ್ಮಮೂಲೇ ಪ್ರಧಾನೇ ತು ಕಿಂ ಕರೋತಿ ಶುಭಗ್ರಹಃ”||
ಇಂತೆಂದುದಾಗಿ
ಬಹ ಕಂಟಕವ ಹೊನ್ನು ಹೆಣ್ಣು ಶುಭಲಗ್ನದಿಂದೆ
ಪರಿಹರಿಸೇನೆಂದಡೆ ಹೋಗಲರಿಯದು.
ಹಸಿವಿಲ್ಲದ ಮದ್ದು ಕೊಟ್ಟೇನು ಅಶನವ ನೀಡೆಂಬಂತೆ,
ಖೇಚರದ ಮದ್ದು ಕೊಟ್ಟೇನು ತೊರೆಯ ದಾಂಟಿಸೆಂಬಂತೆ,
ಕುರುಡನ ಕೈಯ ಕುರುಡ ಹಿಡಿದು ಹಾದಿಯ ತೋರುವಂತೆ,
ಲಜ್ಜೆ ನಾಚಿಕೆ ಇಲ್ಲದೆ ವಿಪ್ರರ ಕೈಯೆ ಲಗ್ನವ ಕೇಳಲಾಗದು.
ಸದ್ಭಕ್ತರಾದವರಿಗೆ ನಿಮ್ಮ ಬಲವೇ ಬಲವಯ್ಯಾ
ಕೂಡಲಚೆನ್ನಸಂಗಮದೇವಾ.
Art
Manuscript
Music
Courtesy:
Transliteration
Śivatantradinda sukhaduḥkhagaḷu
barutihavendariyade
naragurigaḷige, rōga dāridrya
apajayaṅgaḷu baruttiralu
viprage kaimugidu kāṇikeyanikki tanna hesara hēḷi
sūryabala candrabala br̥haspatibala navagrahabalava
kēḷuvavarige elliyadō śivabhakti?
Sūryanu jñānavuḷḷavanādaḍe
gautamamunīśvarana heṇḍati ahalyādēvige mōhisi
muniya śāpadinda kṣayadoḷagihane?
Allade dakṣana yāgadalli halla hōgalāḍisikombane?
Candranu jñānavuḷḷavanādaḍe guruvina heṇḍatige aḷupi
koṇḍoydu jātajvaradalli aḷalutihane?
Br̥haspati jñānavuḷḷavanādaḍe sakala jyōtiṣyagaḷa nōḍi
vivāhavāda heṇḍati rōhiṇīdēviya
candranettikoṇḍu hōhāga sum'maniddudu ēnu jñāna?
Śani jñānavaḷḷavanādaḍe kuṇṭanāgi saṅkōle bīḷvane?
Adu kāraṇa-tamage mumbaha sukhaduḥkhaṅgaḷanariyadavaru
mattobbara sukhaduḥkhaṅgaḷa modale ariyaru.
Br̥haspatiya matadinde dakṣa,
yāgavanikke kuridaleyāyittu.
Br̥haspatiya matadinde dvārāvati nīralli neredu
kr̥ṣṇana hadinārusāvira strīyara
holebēḍaru sereyanoydaru,
śrīrāmana heṇḍati sītāṅgane sereyādaḷu.
Intī tamatamage munde baha
apajayaṅgaḷanariyada kāraṇa,
ā br̥haspati jñāniya matadinde,
abhāṣa jōyisara māta kēḷi
huṇṇime amavāseyalli upavāsaviddu,
grahabalavuḷḷa śubhamuhūrtadalli,
araḷiya marakke nīra hoydu
nūla sutti viprajōyisarge honnu haṇava koṭṭaḍe,
hōdītemba anācāriya māta kēḷalāgadu.
“Vasiṣṭhēna kr̥tē lagnē vanē rāmēṇa vanavāsitē|
karmamūlē pradhānē tu kiṁ karōti śubhagrahaḥ”||
intendudāgi
baha kaṇṭakava honnu heṇṇu śubhalagnadinde
Pariharisēnendaḍe hōgalariyadu.
Hasivillada maddu koṭṭēnu aśanava nīḍembante,
khēcarada maddu koṭṭēnu toreya dāṇṭisembante,
kuruḍana kaiya kuruḍa hiḍidu hādiya tōruvante,
lajje nācike illade viprara kaiye lagnava kēḷalāgadu.
Sadbhaktarādavarige nim'ma balavē balavayyā
kūḍalacennasaṅgamadēvā.