Index   ವಚನ - 1645    Search  
 
ಶಿವಲಿಂಗಾರ್ಚನೆಯ ಮಾಡಿ ಶಿವಾರ್ಪಿತಕ್ಕೆ ಕೈದೆಗೆದಡೆ, ಅದು ಲಿಂಗಾರ್ಪಿತಕ್ಕೆ ನೈವೇದ್ಯ ತನಗೆ ಪ್ರಸಾದವಹುದು. ಇದು ಕಾರಣ-ಕೂಡಲಚೆನ್ನಸಂಗಮದೇವಾ ಇಂತಪ್ಪ ಸಮಯೋಚಿತ ಉಳ್ಳವರ ಎನಗೆ ತೋರಯ್ಯಾ.