Index   ವಚನ - 1685    Search  
 
ಸಂಸಾರಶೀಲರ ನಿರ್ಣಯವೆಂತೆಂದರೆ: ಅವರು ಕಂಠದಲ್ಲಿ ಅವಧರಿಸಿಕೊಂಡುದೆ ಕಂಠಪಾವಡ, ಅವರು ಮಸ್ತಕದಲ್ಲಿ ಧರಿಸಿಕೊಂಡುದೆ ಧೂಳಪಾವಡ, ಅವರು ಹೊಯ್ದುಕೊಂಡುದೆ ಸರ್ವಾಂಗಪಾವಡ, ಅವರಿಗೆ ಹೆಂಡತಿಯೆ ಗುರು, ಮಕ್ಕಳೆ ಪ್ರಾಣಲಿಂಗ, ಮನೆಯಲ್ಲಿ ಇದ್ದವರೆಲ್ಲ ಜಂಗಮ. 'ಸಠಗೆ ಶರಣಾರ್ಥಿ ಮಠಕೆ ಚಿತ್ತೈಸಿ ಮುಂದೆ ಊರಿದೆ ಅಲ್ಲಿ ಸಲಿಸಹೋಗಿ ನಮ್ಮಲ್ಲಿ ಒಬ್ಬ ಒಡೆಯರೈದಾರೆ, ನಾವು ನಿಮ್ಮ ಪಾದವೆ ಗತಿಯಾಗಿಯಿದ್ದೇವೆ ಎಂಬ ಕುಟೀಲಶೀಲರ ಮೆಚ್ಚುವನೆ ನಮ್ಮ ಕೂಡಲಚೆನ್ನಸಂಗಮದೇವ.