Index   ವಚನ - 1688    Search  
 
ಸಗುಣಾನಂದಜೀವಚರ್ಯವಿಡಿದೆತ್ತಿ ಜೀವಾತ್ಮನ ಹೇಯವೆಂದು ಆತ್ಮನ ನಿಜವನರಿದು, ನಿರ್ಗುಣಾನಂದಲೀಲೆಯ ವಿರತಿಯೊಡನೆ ಪರಮಾತ್ಮ ತಾನೆಂದರಿದ ಶರಣಂಗೆ, ಎಂತಿರ್ದುದಂತೆ ಪೂಜೆ ನೋಡಾ. ಆ ಶರಣ ಭೋಗಿಸಿತೆಲ್ಲವು ಲಿಂಗಾರ್ಪಿತ, ರುಚಿಸಿತೆಲ್ಲವು ಪ್ರಸಾದ. ಆ ಶರಣನರಿದುದೆಲ್ಲವು ಪರಬ್ರಹ್ಮ, ನುಡಿದುದೆಲ್ಲವು ಶಿವತತ್ತ್ವ ಆ ಶರಣ ತಾನೆ ಕೂಡಲಚೆನ್ನಸಂಗಯ್ಯ.