Index   ವಚನ - 1692    Search  
 
ಸತ್ಯಸದಾಚಾರವುಳ್ಳ ಶಿವಶರಣರವರಹುದೆಂದುದೆ ಶುಭಮುಹೂರ್ತಂ [ಶುಭಘಳಿಗೆ] ಸಕಲ ಬಲ, ಸಕಲ ಜಯ. ಅವರಲ್ಲವೆಂಬುದೇ ವಿಘ್ನ ವಿಷಗಳಿಗೆ ನಿರ್ಬಲ ಅಪಜಯ. ಅದೆಂತೆಂದಡೆ: ಅವರು ಮಾಡುವ ಕಾರ್ಯವೆಲ್ಲಾ ಕೂಡಲಚೆನ್ನಸಂಗಮಾಧೀನವಾಗಿ. ನೀನೆ ಮೃತ್ಯುಂಜಯನು, ವಿಶ್ವಾಧಿಪತಿಯಾದ ಕಾರಣ ಜಯವಪ್ಪುದಯ್ಯಾ.