Index   ವಚನ - 1711    Search  
 
ಸಾಯುವರ ಸತ್ತವರು ಹೊತ್ತರು, ತಲೆಯಿಲ್ಲದವರತ್ತರು, ಕೈಯಿಲ್ಲದವರು ಹಿಡಿದರು, ಕಾಲಿಲ್ಲದವರು ಕೊಂಡೊಯ್ದರು, ಕಣ್ಣಿಲ್ಲದವರು ಕಂಡರು, ಕಿವಿಯಿಲ್ಲದವರು ಕೇಳಿದರು. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣರು ಸರ್ವಾಂಗಲಿಂಗಿಗಳು.