Index   ವಚನ - 1717    Search  
 
ಸುರೆಯ ತುಂಬಿದ ಭಾಂಡವನು ಎನಿಸು ವೇಳೆ ಜಲದಿ ತೊಳೆದಡೇನು ಒಳಗೆ ಶುದ್ಧವಾಗಬಲ್ಲುದೆ? ಬಾಹ್ಯದ ಜಲತೀರ್ಥದಲ್ಲಿ ಮುಳಿ ಮುಳಿಗಿ ಎದ್ದಡೇನು ಅಂತರಂಗದ ಮಲಿನತ್ವವು ಮಾಂಬುದೆ? ಹೇಳಾ. "ಚಿತ್ತೇ ತ್ವಂತರ್ಗತಂ ದೌಷ್ಟ್ಯಂ ತೀರ್ಥಸ್ನಾನೈರ್ನ ಶುದ್ಧ್ಯತಿ| ಶತಶೋsಪಿ ಜಲೈರ್ಧೌತಂ ಸುರಾಭಾಂಡಮಿವಾಶುಚಿಃ"|| ಎಂದುದಾಗಿ ಚಿದಾಕಾಶವನೊಳಕೊಂಡ ಶಿವಜ್ಞಾನಿಗಳ ಪಾದೋದಕವ ಪಡೆದು, ಭಕ್ತರು ಭವರಹಿತರಾದರು ಕಾಣಾ, ಕೂಡಲಚೆನ್ನಸಂಗಮದೇವಾ.