Index   ವಚನ - 1750    Search  
 
ಹೃದಯದೊಳಿಪ್ಪ ಮಹಾಲಿಂಗಜ್ಯೋತಿಯ ಬೆಳಗು, ಪಂಚೇಂದ್ರಿಯಂಗಳಲ್ಲಿ ಪ್ರಭಾವಿಸಿ ತೋರುವ ಬೆಳಗು, ಒಂದೆ ಕಾಣಿ ಭೋ. ಒಂದು ಮೂರಾಗಿ, ಮೂರು ತಾನಾರಾಗಿ ಆರು ಮೂವತ್ತಾರಾಗಿ ಮೂವತ್ತಾರು ಇನ್ನೂರುಹದಿನಾರಾಗಿ, ಬೇರುವರಿದು ವಿಸ್ತಾರವ ಪಡೆದವಲ್ಲಾ! ವಿಶ್ವಾಸದಿ ಬೆಳಗುವ ಬ್ರಹ್ಮಕ್ಕೂ ಗಣಿತವುಂಟೆ? ಅಗಣಿತವೆಂದು ಅಗೋಚರವೆಂದು ಹೇಳುವರಲ್ಲದೆ, ದೃಶ್ಯವಾಗಿ ಕಾಬವರುಂಟೆ? ದೃಗುದ್ಯಶ್ಯವಲ್ಲ ಮಹಾದಾನಿ ಕೂಡಲಚೆನ್ನಸಂಗಮದೇವ.