Index   ವಚನ - 1    Search  
 
ಎನಗೆ ಕರಿ ಕಂಡ ಸ್ವಪ್ನದ ಇರವು. ಹರಿ ಬಂದಂಗದಲ್ಲಿ ನಿಲೆ ಬೆದರಿ ಉಡುಗಿತ್ತು. ಅದರಿರವು ಎನಗಾಯಿತ್ತು. ಜಿನವಾಸ ಬಿಟ್ಟು, ದಿನನಾಶನ ವಾಸವಾಯಿತ್ತು. ಎನಗಿದೆ ಸಾಫಲ್ಯ, ಕೇವಲ ಜ್ಞಾನ, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.