ಈ ವಚನ ಉದ್ದೇಶ ಲಕ್ಷಣ ಪರೀಕ್ಷೆ ಮೂರು ತೆರನು:
ಆಡು[ಹ]ಲ್ಲ ತಿಂಬಲ್ಲಿ, ಕೋಡಗ ನೋಡಿ ಬಾಲವ ತಿಂದಿತ್ತು.
ಕೋಡಗದ ದಾಡೆ ಆಡುವಾಗ ಬಳ್ಳು ಮಾತಾಡಿದುದಿಲ್ಲ.
ಗೊಲ್ಲನ ಬಿಲ್ಲ ಕೊಪ್ಪ ಕಂಡು,
ಆ ಬಳ್ಳು ತನಗೆ ಇಲ್ಲಿ ಇಲ್ಲವೆಂದು, ಎಲ್ಲಿ ಅಡಗಿತ್ತೆಂದರಿಯೆ.
ಅದರ ಅಡಿವಜ್ಜೆಯ ತೋರು,
ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ.