Index   ವಚನ - 11    Search  
 
ಗುಂಡಿಯ ಹಳ್ಳವು ತುಳುಕಲಾಗಿ ಇಳಿಯಿತ್ತು ಮತ್ಸ್ಯ, [ಬ]ಂಡಿನ ತಂಡಕಾಗಿ. ಖಂಡವ ಮೆಲುವರ ಬಾಯಲ್ಲಿ, ಮೂರು [ಹೆ]ಂಡವ ಕೂಡಿ ಭಂಡಾದರು, ಮಲತ್ರಯದ ಅಂಗದಲ್ಲಿ ಸಿಕ್ಕಿ ಘನಲಿಂಗವನರಿಯದೆ. ಆತ್ಮನ ಅಂಗದ ಲಿಂಗದ ಸಂಗವ ತೋರು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.