ಕೂಟದಿಂದ ಕೂಸು ಹುಟ್ಟುವಡೆ ಬ್ರಹ್ಮನ ಆಟಕೋಟಲೆಯೇಕೆ ?
ಸ್ಥಿತಿ ಆಟದಿಂದ ನಡೆವಡೆ ವಿಷ್ಣುವಿನ ಭೂತಹಿತವೇಕಯ್ಯಾ ?
ಘಾತಕದಿಂದ ಕೊಲುವಡೆ ರುದ್ರನ ಆಸುರವೇತಕ್ಕೆ ?
ಇಂತಿವೆಲ್ಲವೂ ಜಾತಿಯುಕ್ತವಲ್ಲದೆ
ತಾ ಮಾಡುವ ನೀತಿಯುಕ್ತವಲ್ಲ.
ಇದಕಿನ್ನಾವುದು ಗುಣ ?
ಭೇದಿಸಾ, ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.
Art
Manuscript
Music
Courtesy:
Transliteration
Kūṭadinda kūsu huṭṭuvaḍe brahmana āṭakōṭaleyēke?
Sthiti āṭadinda naḍevaḍe viṣṇuvina bhūtahitavēkayyā?
Ghātakadinda koluvaḍe rudrana āsuravētakke?
Intivellavū jātiyuktavallade
tā māḍuva nītiyuktavalla.
Idakinnāvudu guṇa?
Bhēdisā, gūḍina gum'maṭanoḍeya agamyēśvaraliṅga.