Index   ವಚನ - 25    Search  
 
ಮಾಯೆಯ ಗೆದ್ದೆ[ಹೆ]ನೆಂದು, ಮತಿ ಮಂದಿರದಲ್ಲಿ ಕಂದಮೂಲಾದಿಗಳ ಫಲಪರ್ಣಂಗಳಿಂದ, ಕಾಲವ ವಂಚಿಸಿಹೆನೆಂದು ಇದ್ದುದೆ ಮಾಯಾಸಂಬಂಧ. ಅದು ದ್ವೇಷದ ಭ್ರಾಂತಲ್ಲದೆ, ಶಾಂತಿಯ ಕಲೆಯಲ್ಲ. ಅರಿದು ಮರೆದವ, ಕಾಷ್ಠ ಕರಿಪಯ ಸಂಗದಂತೆ, ಆತನಿರವು, ಅಷ್ಟೆ ಭಾವ. ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತತ್ಪ್ರಾಣಮೂರ್ತಿ.