ಗಿರಿಯ ಗುಹೆಯಲ್ಲಿ ಒಂದು ಅರಿಬಿರಿದಿನ ಹುಲಿ.
ಹುಲ್ಲೆಯ ಭಯಕಾಗಿ ಎಲ್ಲಿಯೂ ಹೊರಡಲಮ್ಮದೆ ಅಲ್ಲಿ ಅದೆ.
ಅದ ಮೆಲ್ಲನೆ ನೋಡಿ ಬಿಲ್ಲಂಬಿನಲ್ಲಿ ಎಸೆಯೆ,
ಹುಲಿ ಹಾರಿ ಹುಲ್ಲೆಯಾಯಿತ್ತು.
ಆ ಹುಲ್ಲೆ ಬಲೆಯೊಳಗಲ್ಲ, ಬಾಣದೊಳಗಲ್ಲ,
ಎಲ್ಲಿಯೂ ಸಿಕ್ಕದು. ಇದ ಬಲ್ಲವರಾರು ?
ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ,
ತಿರುಗುವ ಭರಿತನು.
Art
Manuscript
Music
Courtesy:
Transliteration
Giriya guheyalli ondu aribiridina huli.
Hulleya bhayakāgi elliyū horaḍalam'made alli ade.
Ada mellane nōḍi billambinalli eseye,
huli hāri hulleyāyittu.
Ā hulle baleyoḷagalla, bāṇadoḷagalla,
elliyū sikkadu. Ida ballavarāru?
Guḍiya gum'maṭanoḍeya agamyēśvaraliṅga,
tiruguva bharitanu.