ಸುಜ್ಞಾನ ಅಜ್ಞಾನವೆಂಬ ಉಭಯದ ಭೇದ,
ದೀಪದ ಕುಡಿವೆಳಗಿನ ಧೂಮದ ಪರಿಯಂತೆ.
ಅರಿವು ಮರವೆ ಬೇರೆ ಎಡೆದೆರಪಿಲ್ಲದೆ ಪುದಿದು,
ಆತ್ಮನಲ್ಲಿ ಎಡೆಬಿಡುವಿಲ್ಲದಿಪ್ಪುದು,
ಹೆರೆಹಿಂಗುವ ಪರಿಯಿನ್ನೆಂತೊ?
ಪಂಕ ಸಲಿಲದಂತೆ, ಪಾಷಾಣ ಪಾವಕನಂತೆ,
ತೈಲ ರಜ್ಜುವಿನ ಯೋಗದಂತೆ
ಹೆರೆಹಿಂಗಿದಡೆ ಅರಿಯಬಾರದು.
ಕೂಡಿದ್ದಡೆ ಅರಿವಿಂಗೆ ವಿರೋಧ.
ಗೋವು ಮಾಣಿಕವ ನುಂಗಿದಂತೆ.
ಇದಾರಿಗೂ ಅಸಾಧ್ಯ, ಗುಡಿಯ
ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ಅವನರಿದವಂಗಲ್ಲದಿಲ್ಲ.
Art
Manuscript
Music
Courtesy:
Transliteration
Sujñāna ajñānavemba ubhayada bhēda,
dīpada kuḍiveḷagina dhūmada pariyante.
Arivu marave bēre eḍederapillade pudidu,
ātmanalli eḍebiḍuvilladippudu,
herehiṅguva pariyinnento?
Paṅka saliladante, pāṣāṇa pāvakanante,
taila rajjuvina yōgadante
herehiṅgidaḍe ariyabāradu.
Kūḍiddaḍe ariviṅge virōdha.
Gōvu māṇikava nuṅgidante.
Idārigū asādhya, guḍiya
gum'maṭanoḍeya agamyēśvaraliṅga avanaridavaṅgalladilla.