Index   ವಚನ - 38    Search  
 
ಹಾದಿಯ ತೋರಿದವರೆಲ್ಲರು ಭಯಕ್ಕೆ ನಿರ್ಭಯವಂತರಾಗಬಲ್ಲರೆ? ವೇದ ಶಾಸ್ತ್ರ ಪುರಾಣ ಆಗಮಂಗಳ ಹೇಳುವರೆಲ್ಲರು ವೇದಿಸಬಲ್ಲರೆ ನಿಜತತ್ವವ? ಹಂದಿಯ ಶೃಂಗಾರ, ಪೂಷನ ಕಠಿಣದಂದ, ಅರಿವಿಲ್ಲದವನ ಸಂಗ, ಇಂತಿವರ ಬಿಡುಮುಡಿಯನರಿ. ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ, ಎಡೆಬಿಡುವಿಲ್ಲದೆ ಒಡಗೂಡು.