ಹಾರುವ ಹಕ್ಕಿಯ ಹಿಡಿದೆ, ಬೀಸುವ ಗಾಳಿಯ ಹಿಡಿದೆ.
ವೈಶಾಖದ ಬಿಸಿಲ ಹಿಡಿದು ಜಗವ ಹಾಸಿ ಕಟ್ಟಿದೆ.
ಒಂದು ತಾರು ಗಂಟು, ಒಂದು ಜಿಗುಳು ಗಂಟು,
ಒಂದು ಕುರುಹು ಗಂಟು.
ಮೂರರ ಮುದ್ರೆಯ ಮೀರಿ ಹಾರಿತ್ತು ಹಕ್ಕಿ.
ಬೀಸಿತ್ತು ಗಾಳಿ, ಹುಯ್ಯಿತ್ತು ಬಿಸಿಲು.
ಬಿಸಿಲ ಢಗೆ ತಾಗಿ, ವಸುಧೆಯವರೆಲ್ಲರೂ
ಬಾಯಿ ಕಿಸವುತ್ತಿದ್ದರು.
ಕಿಸುಕುಳರ ನೋಡಿ, ಶರೀರದ ಗೂಡಿನ ಒಡೆಯ
ಗುಮ್ಮಟನ ಪ್ರಾಣ, ಅಗಮ್ಯೇಶ್ವರಲಿಂಗ ಒಡಗೂಡುತ್ತಿದ್ದ.