Index   ವಚನ - 58    Search  
 
ನೋಡುವ ನಯನ ತೆರಪಾದಡೇನು, ಆಡುವ ಬೊಂಬೆಯಿಲ್ಲದ ಮತ್ತೆ? ಗಾಡದ ಘಟ ಇದ್ದಡೇನು, ಮಾತಾಡುವ ಆತ್ಮನಿಲ್ಲದಂತೆ. ರೂಢಿಯಲ್ಲಿ ಬೋಧಕರಿದ್ದಡೇನು, ನಿಗಮಗೋಚರನ ವೇದಿಸಬೇಕು. ಇದು ಬೋಧಕ ಗುರುವಿನ ಅರಿವು, ಇದು ಸಿದ್ಧ. ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಗುರುನಿರ್ವಾಣಸ್ಥಲ.