Index   ವಚನ - 72    Search  
 
ತಟಾಕ ಒಡೆದಡೆ ಪ್ರತಿಶಬ್ದವಲ್ಲದೆ ಗತಿಭಿನ್ನವುಂಟೆ? ಅಂಬುಧಿಗೆ ಅದು ತುಂಬಿದ ಸಂಪದ, ಅದರಂಗದ ಇರವು, ಲಿಂಗಾಂಗಿಯ ಭಾವದ ಸಂಗ. ಕಂಡುದ ಕಂಡು ಕಾಳ್ಗೆಡೆವ ಲಿಂಗಿಗಳಿಗುಂಟೆ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದ ಸಂಗದ ಸುಖವು?