ಬ್ರಹ್ಮಂಗೆ ಇಚ್ಫಾಶಕ್ತಿಯಾಗಿದ್ದಲ್ಲಿ,
ವಿಷ್ಣುವಿಂಗೆ ಕ್ರಿಯಾಶಕ್ತಿಯಾಗಿದ್ದಲ್ಲಿ,
ರುದ್ರಂಗೆ ಜ್ಞಾನಶಕ್ತಿಯಾಗಿದ್ದಲ್ಲಿ,
ಇಂತಿವರು ದಂಪತಿ ಸಹಜವಾಗಿ
ಯುಗಜುಗಂಗಳ ಜೋಗೈಸುತ್ತಿದ್ದರು.
ಬ್ರಹ್ಮಂಗೆ ಸರಸ್ವತಿಯೆಂದಾರು!
ವಿಷ್ಣುವಿಗೆ ಲಕ್ಷ್ಮೀದೇವಿಯೆಂದಾರು!
ರುದ್ರಂಗೆ ಉಮಾದೇವಿಯೆಂದಾರು!
ಬ್ರಹ್ಮ ಅಂಗವಾಗಿ, ವಿಷ್ಣು ಪ್ರಾಣವಾಗಿ,
ರುದ್ರ ಉಭಯಜ್ಞಾನವಾಗಿ,
ಅಂದು ತಾಳಿದ ಸಾಕಾರದ ಗುಡಿಯ ಐಕ್ಯನಾದ ಕಾರಣ,
ಗುಮ್ಮಟನೆಂಬ ನಾಮವ ತಾಳಿ,
ಅಗಮ್ಯೇಶ್ವರಲಿಂಗ ಗುಹೇಶ್ವರನಾದ.
Art
Manuscript
Music
Courtesy:
Transliteration
Brahmaṅge icphāśaktiyāgiddalli,
viṣṇuviṅge kriyāśaktiyāgiddalli,
rudraṅge jñānaśaktiyāgiddalli,
intivaru dampati sahajavāgi
yugajugaṅgaḷa jōgaisuttiddaru.
Brahmaṅge sarasvatiyendāru!
Viṣṇuvige lakṣmīdēviyendāru!
Rudraṅge umādēviyendāru!
Brahma aṅgavāgi, viṣṇu prāṇavāgi,
rudra ubhayajñānavāgi,
andu tāḷida sākārada guḍiya aikyanāda kāraṇa,
gum'maṭanemba nāmava tāḷi,
agamyēśvaraliṅga guhēśvaranāda.