Index   ವಚನ - 87    Search  
 
ಹಾವು ಹಲ್ಲಿ ಮಾರ್ಜಾಲ ಇವ ಹಾಯಿಸಿ ಕಂಡೆಹೆನೆಂಬುದರಿಂದ ಕಡೆಯೆ, ಲಿಂಗವ ಹಿಡಿದಿದ್ದ ಸಾಕಾರ ಅಂಗನ ಇರವು? ಮುಂದೆ ಬಹುದ ಹೇಳಿಹೆನೆಂದು ವಿಹಂಗನನೆಬ್ಬಿಸಿ, ಹೋಹರ ಕಂಡು ನಂಬುವರಿಂದ ಕಡೆಯೆ, ಲಿಂಗವ ಹಿಡಿದ ಅಂಗ? ಛೀ, ಸಾಕು ಸುಡು. ಇವರಿಗೆ ಲಿಂಗ ಕೊಟ್ಟ ದರುಶನ[ವ], ಭಂಡನ ಕಂಡು ಅಡಗಿದ ಗುಡಿಯೊಳಗೆ, ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.