Index   ವಚನ - 93    Search  
 
ಮಾಣಿಕದ ಮಣಿ, ಉರಿಯ ಬೆಳಗಲ್ಲದೆ ಸುಡುವುದಿಲ್ಲ. ಉದಕದ ಮಡು, ಮುಳುಗಲ್ಲದೆ ಕೊಲುವುದಿಲ್ಲ. ನಿನ್ನನರಿದಲ್ಲದೆ ನೀನವರನರಿಯೆನೆಂಬ ನೇಮವೆ? ಅಯಃಕಾಂತದ ಶಿಲೆ ಲೋಹದಂತೆ ಉಭಯಗುಣಸಂಪನ್ನ ನೀನೆ. ಅಂದಿಗೆ ಅನಿಮಿಷನ ಕೈಯಲ್ಲಿ, ಇಂದಿಗೆ ಪ್ರಭುವಿನ ಗುಹೆಯಲ್ಲಿ ಗುಹೇಶ್ವರನಾದೆ. ಎನ್ನ ಗುಡಿಗೆ ಬಂದು ಗುಮ್ಮಟಂಗೆ ಮಠಸ್ಥನಾದೆ. ಅಗಮ್ಯೇಶ್ವರಲಿಂಗವೆ, ನನಗೂ ನಿನಗೂ ಕೊಳುವಿಡಿಯೇಕೆ? ಕೊಂಡು ಹೋಗು, ಶಿವಶಿವಾ ಸಮರ್ಪಣ.