Index   ವಚನ - 99    Search  
 
ಪಂಚಭೂತಿಕದೊಳಗಾದ ಭೂತಭವಿಷ್ಯದ್ವರ್ತಮಾನ ಯುಗಜುಗಂಗಳ ಪ್ರಮಾಣು. ಮೂವರ ಮೊದಲಿಲ್ಲದಲ್ಲಿ, ಅಂಧರ ನಿರಂಧರ ಮಹಾ ಅಂಧಕಾರ ಸಂದಲ್ಲಿ, ನಿಮ್ಮ ಬೆಂಬಳಿಯನರಿದವರಾರು? ಮನುವಿಂಗೆ ಮನು, ಘನಕ್ಕೆ ಘನ, ಬೆಳಗಿಂಗೆ ಬೆಳಗು, ಅವಿರಳಕ್ಕೆ ಅವಿರಳನಾಗಿ, ನಾಮಕ್ಕೆ ನಿರ್ನಾಮನಾಗಿ, ಅನಲ ಅನಿಲ ರವಿ ಶಶಿ ಕುಂಭ ಕುಂಭಿನಿ ನಭಯೋದ್ಯಮಾನ, ಅಘರಂಧರ ಅಕ್ಷಮಾಯ, ಕುಕ್ಷಿ ಕಕ್ಷ ಮಾಯ, ಮಹಿ ಪ್ರತ್ಯಂತರ, ವಿಸರ್ಜನ ನಿಷಿತ, ಭಸಿತೋನ್ಮಯ ಪುಂಜ. ಸಕಲೇಂದ್ರಿಯ ದೈಹ್ಯ, ಭಕ್ತಕೃಪಾವಲ್ಲಭ ಹೃತ್ಕಮಲನಿವಾಸಪರಿಪೂರಿತ ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ, ಕೂಡು ಕೂಟಸ್ಥನಾಗಿರು.