Index   ವಚನ - 1    Search  
 
ಶ್ರೀಮದ್ರಾಜಿತ ಭದ್ರವಾಹನ ಮಹಾ ಮದ್ರಾಪುರಾಧೀಶ್ವರಂ ಹೇಮಾದ್ರಿಃ ಶತಕೋಟಿ ಚಿದ್ರಮಣ ಹೃದ್ರಾಜೀವಚಿದ್ಭಾಸ್ಕರಂ! ನಿಸ್ತಂದ್ರಂ ನಿರುಪದ್ರವ ನಿರುಪಮಂ ನಾಗಾಂಚಿತಾಂಗಂ ಮಹಂ ತತ್ವಾತೀತಮಹಂ ನಮಾಮಿ ನಿರಘಂ ಮತ್ಕಾಂತ ಶಾಂತಂ ಪ್ರಭು. ಶ್ರೀಮದ್ವಿತೀಯ ಮುರಿಗಾ ಗುರುಸಿದ್ದ ದೇವಂ ಸಾಕ್ಷಾದ್ವಿತೀಯ ಜಿತ ತಾರಕಮೇವ ಸತ್ಯಂ| ಸರ್ವಾಂಗಮಾದ್ಯಮಖಿಳಲೇಂದ್ರಿಯ ತಂತ್ರರೂಪಂ ಧ್ಯಾನಂ ಕರೋಮಿ ಸತತಂ ಭವನಾಶನಾಯಂ. ವಚನಂ: ವಚನ ಪರಿಭಾಷಣೇತಿಧಾತು ಪೂರ್ವೋಕ್ತ ಗ್ರಂಥಾರ್ಥಮಂ ಪ್ರಕಟೀಕರಿಸಿ ಗುರುಸ್ತೋತ್ರಮಂ ಮಾಳ್ಪೆಂ. ಅದೆಂತೆಂದೊಡೆ, ಮುವತ್ತಾರು ತತ್ವ ಸ್ವರೂಪನಾದಂಥಾ ಸತ್ತೆ ಅಂಗ, ಚಿತ್ತೆ ಲಿಂಗ, ಅನಂದವೆ ಭಕ್ತಿ. ಮತ್ತಂ ಸತ್ತೆ ಕ್ರಿಯೆ, ಚಿತ್ತ ಜ್ಞಾನ, ಅನಂದವೇ ತೃಪ್ತಿ, ಸತ್ತೆ ಕ್ರಿಯಾ ಸ್ವರೂಪವಾದ ಗುರು, ಚಿತ್ತೆ ಜ್ಞಾನಸ್ವರೂಪವಾದ ಲಿಂಗ, ಆನಂದವೆ ಸದ್ಭಾವಸ್ವರೂಪವಾದ ಜಂಗಮ, ಸತ್ತೆ ಅಚಾರಲಿಂಗ, ಗುರುಲಿಂಗ, ಚಿತ್ತೆ ಶಿವಲಿಂಗ, ಜಂಗಮಲಿಂಗ, ಆನಂದವೆ ಪ್ರಸಾದಲಿಂಗ, ಮಹಾಲಿಂಗ ಸತ್ತೆ ತ್ವಂ ಪದ, ಚಿತ್ತೆ ತತ್ವದ, ಆನಂದವೆ ಅಸಿ ಪದ. ಸತ್ತೆ ಕ್ರಿಯಾ ಸ್ವರೂಪವಾದ ನಾಲ್ವತ್ತನಾಲ್ಕಂಗಸ್ಥಲಂ,ಚಿತ್ತೆ ಜ್ಞಾನಸ್ವರೂಪವಾದ ಅಯ್ವತ್ತೇಳು ಲಿಂಗಸ್ಥಲಂ, ಅನಂದವೆ ಷಡ್ವಿಧ ಭಕ್ತಿ ಸ್ವರೂಪವಾದ ಐಕ್ಯವು. ಇಂತೀ ಪದತ್ರಯಂಗಳಂ ಗರ್ಭೀಕರಿಸಿಕೊಂಡಿರ್ಪ ಶತೈಕೋತ್ತರ ಸ್ಥಲ ಸ್ವರೂಪವಾದ ವೇದಾಂತ ಜ್ಞಾನಜನ್ಯ ಜ್ಞಾನದಲ್ಲಿ ರಮಿಸುತಿರ್ದಂಥ ಆಚಾರ್ಯ ಸ್ವರೂಪನಾದ ಪರಶಿವಂಗೆ ನಮಸ್ಕರಿಸುವೆನು