Index   ವಚನ - 7    Search  
 
ಇನ್ನು ಪೂರ್ವೋಕ್ತ ಸ್ಥಲ ನಿರ್ದೇಶನವೆಂತೆಂದೊಡೆ: ಮಾದೇವಾದಿ ದೇವನಿಂದ ಆವುದಾನೊಂದು ರಹಸ್ಯಾರ್ಥವಹ ಸ್ಥಲ ನಿರ್ದೇಶವು ಹೇಳಿಸೊಕೊಳ್ಳುತ್ತಂ ಇಹುದು ಅದನೀಗ ಮೊದಲಲ್ಲಿ ಸಂಕ್ಷೇಪ್ತವಾಗಿ ಹೇಳಿಹೆನು ಅದೆಂತಂದೊಡೆ: ಒಂದೆಯಾಗಿರ್ದ ಸಚ್ಚಿದಾನಂಧ ಲಕ್ಷಣವನುಳ್ಳ ಪರಬ್ರಹ್ಮವಹ ಶಿವತತ್ವ್ವವನೆ ಶಿವಾಚಾರ್ಯರುಗಳು ‘ಸ್ಥಲ’ವೆಂದಾ ನಿರೂಪಿಸಿದರಯ್ಯ ಶಾಂತವೀರೇಶ್ವರಾ