ಅವುದಾನೊಂದು ಕಾರಣದಿಂದ
ಮೊದಲು ಪ್ರಕೃತಿ ಪುರುಷಾತ್ಮವಹ ವಿಶ್ವವು ಎಲ್ಲಿ ಇರುತ್ತಿಹುದು
ಮತ್ತೆ ಕಡೆಯಲ್ಲಿ ಎಲ್ಲಿ ಅಡಗುತ್ತಿಹದು
ಅದು ಕಾರಣದಿಂದ ಅಲ್ಲಿಯದೆ ‘ಸ್ಥಲ’ವೆಂಬ ನಾಮವರ್ತಿಸೂದು.
ಅದೆಂತೆಂದೊಡೆ:
ಯತ್ರಾದೌ ಸ್ಥೀಯತೆ ವಿಶ್ವ ಪ್ರಾಕೃತಂ ಪೌರಷಂ ಯತಃ|
ಲೀಯತೇ ಪುನರಂತೆ ಚ ಸ್ಥಲಂ ತತ್ಪ್ರೋಚ್ಚತೆ ತತಃ||
ಎಂದುದಾಗಿ ಶಾಂತವೀರೇಶ್ವರಾ